ತೆರೆಮರೆಯ ತುಳು ಬರಹಗಾರ ಶ್ರೀ ರಮೇಶ್ ಕುಲಾಲ್ ಬಾಯಾರು- ramesh kulal bayar

ತೆರೆಮರೆಯ ತುಳು ಬರಹಗಾರ ಶ್ರೀ ರಮೇಶ್ ಕುಲಾಲ್ ಬಾಯಾರು

07 Jun | 2021
1
1154 views

ನಮಗೆಲ್ಲರಿಗೂ ತಿಳಿದಿದೆ ಬರಹಗಾರಿಕೆ ಒಂದು ಅದ್ಭುತ ಕಲೆ, ಎಲ್ಲರಿಂದಲೂ ಬರಹಗಾರರಾಗಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ನಿತ್ಯ ಜೀವನದಲ್ಲಿ ಅನೇಕ ಕಥೆಗಳು, ಕವನಗಳು ಮುಂತಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪುಸ್ತಕಗಲ್ಲಿ ಮತ್ತು ಲೇಖನಗಳಲ್ಲೆಲ್ಲಾ ಓದುತ್ತೇವೆ, ಮನರಂಜಿಸುತ್ತೇವೆ ಮತ್ತು ಅದರಿಂದ ನಮ್ಮ ಜ್ಞಾನ ವೃದ್ಧಿಸುತ್ತೇವೆ. ಆದರೆ ಅದರ ಹಿಂದಿರುವ ಬರಹಗಾರನನ್ನು ನಾವು ತಿಳಿಯುವುದಿಲ್ಲ ಮತ್ತು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಕೆಲವರು ಬರಹಗಾರಿಕೆಯನ್ನು ತನ್ನ ವೃತ್ತಿಯಾಗಿ ಮಾಡುತ್ತಾರೆ ಮತ್ತು ಕೆಲವರು ಬರಹಗಾರಿಯಲ್ಲಿ ಸಾಧನೆಯನ್ನು ಮಾಡುವುದಕ್ಕಾಗಿ ಮತ್ತು ಹಲವಾರು ಮಂದಿ ತಮ್ಮ ಹವ್ಯಾಸವಾಗಿ ಇದನ್ನು ಮಾಡುತ್ತಾರೆ. ಅಂತಹ ಒಬ್ಬ ತುಳು ಹವ್ಯಾಸಿ ಬರಹಗಾರರೆ ಶ್ರೀ ಯುತ ರಮೇಶ್ ಕುಲಾಲ್ ಬಾಯಾರ್.