ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ಸಾಮಾನ್ಯವಾಗಿ ಕೃಷ್ಣನ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಶ್ರೀ ಕೃಷ್ಣನ ಬಗ್ಗೆ ಕೆಲವು ವಿಶಿಷ್ಟವಾದ ಮಾಹಿತಿಯನ್ನು ನಾವು ತಿಳಿಸುತ್ತೇವೆ.

1) ಕೃಷ್ಣ ಹುಟ್ಟಿದ್ದು 5252 ವರ್ಷಗಳ ಹಿಂದೆ.

2)ಜನ್ಮ ದಿನಾಂಕ ಜುಲೈ 18 ಕ್ರಿಪೂ 3229

3) ತಿಂಗಳು : ಶ್ರಾವಣ

4) ದಿನ :  ಅಷ್ಟಮಿ

5) ನಕ್ಷತ್ರ : ರೋಹಿಣಿ

6) ದಿನ  : ಬುಧವಾರ

7) ಸಮಯ : 00:00 A.M.

8)  ಶ್ರೀ ಕೃಷ್ಣ 125 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ.

9)  ಮರಣ ದಿನ 18 ಫೆಬ್ರವರಿ ಕ್ರಿಪೂ 3102 

10) ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು.

11) ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು.

12)  ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.

13) ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ  ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.

14) ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2 ರಂದು ತೀರಿಕೊಂಡರು(  ಉತ್ತರಾಯಣದ ಮೊದಲ ಏಕಾದಶಿ)

15) ಶ್ರೀ ಕೃಷ್ಣನನ್ನು

       (a) ಮಥುರಾದಲ್ಲಿ ಕನ್ನಯ್ಯಾ

       (b) ಓಡಿಸ್ಸಾದಲ್ಲಿ ಜಗನ್ನಾಥ

        (c) ಮಹಾರಾಷ್ಟ್ರದಲ್ಲಿ ವಿಠಲ

        (d) ರಾಜಸ್ತಾನದಲ್ಲಿ ಶ್ರೀನಾಥ

         (e) ಗುಜರಾತಲ್ಲಿ ದ್ವಾರಕಾಧಿಶ್

         (f) ಉಡುಪಿಯಲ್ಲಿ ಕೃಷ್ಣ

          (g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.

16) ಕೃಷ್ಣ ನ ತಂದೆ : ವಾಸುದೇವ

17) ತಾಯಿ : ದೇವಕಿ

18) ಸಾಕು ತಂದೆ :ನಂದ

19) ಸಾಕುತಾಯಿ : ಯಶೋದೆ

20) ಹಿರಿಯಣ್ಣ: ಬಲರಾಮ

21) ತಂಗಿ : ಸುಭದ್ರೆ

22) ಜನ್ಮ ಸ್ಥಳ :ಮಥುರಾ

23) ಪತ್ನಿಯರು :ರುಕ್ಮಿಣೀ, ಸತ್ಯಭಾಮ.....

24) ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ.

     (i) ಚನೋರ

     (ii) ಕಂಸ

     (iii) ಶಿಶುಪಾಲ

     (iv)ದಂಟವಕ್ರ

25) ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ. ಇದೊಂದು ಅಂತರ್ ಜಾತಿ ವಿವಾಹ ಆಗಿತ್ತು.

26) ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು. ಕಪ್ಪು ಬಣ್ಣದವನಾದ ಇವನನ್ನು ಜನಾಂಗಿಯವಾಗಿ ನಿಂದಿಸುತ್ತಿದ್ದರು ಮತ್ತು ಹಿಯಾಳಿಸುತ್ತಿದ್ದರು.

27) ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ.

28) ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ. ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ.

29) ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ.

30)  ಮುಂದಿನ ದಿನದಲ್ಲಿ ಸಿಂಧೂ ರಾಜ ಕಲಯಾವನನ ಬೆದರಿಕೆಗೆ ಈತ ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದ.

31)ವೈನಾತೆಯ ಎಂಬ ಗಿರಿಜನರ(ಈಗಿನ ಗೋವಾ) ಸಹಾಯದಿಂದ ಈತ ಜಾರಾಸಂಧಾನನ್ನು ಸೋಲಿಸಿದ್ದ.

32) ಅಳಿದು ಹೋಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣ ಮತ್ತೆ ಕಟ್ಟಿದ.

33)  ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದ ಈತ ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ.

34)ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಈತನಿಗೆ ತಿಳಿಯುತ್ತದೆ.ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಸುತ್ತಾನೆ.

35) ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು  ಪಾಂಡವರಿಗೆ ಸಹಾಯ ಮಾಡುತ್ತಾನೆ.

36) ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ.

37) ಪಾಂಡವರ ಗಡಿಪಾರಿನ ಸಮದಲ್ಲಿ ಪಾಂಡವರ ಪರವಾಗಿ ನಿಲ್ಲುತ್ತಾನೆ.

38) ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುವಂತೆ ಮಾಡುತ್ತಾನೆ.

39) ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡಿ, ಧರ್ಮದ ರಕ್ಷಣೆ ಮಾಡುತ್ತಾನೆ.

40) ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸಿದ ಮಹಾನ್ ಸಾಲುಗಳೇ "ಭಗವದ್ಗೀತೆ"

41) ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುದನ್ನು ಆತ ನೋಡಬೇಕಾಯಿತು.

42)   ಜಾರಾ ಎನ್ನುವ ಬೇಟೆಗಾರನಿಂದ ಕೊನೆಗೆ ಶ್ರೀ ಕೃಷ್ಣನ ಹತ್ಯೆಯಾಯಿತು.

43)  ಜೀವನದಲ್ಲಿ ಏನೂ ಜಾದೂ ಮಾಡದ ಸಾಮಾನ್ಯ ವ್ಯಕ್ತಿತ್ವ ಈತನದ್ದು. ಆತನ ಜೀವನ ಅತ್ಯಂತ ಕಠಿಣವಾಗಿತ್ತು ಮತ್ತು ಪ್ರತಿಕ್ಷಣವೂ  ಹೊಸ ಸವಾಲುಗಳಿಂದ ಕೂಡಿತ್ತು. ಯಾವತ್ತಿಗೂ ತನ್ನ ನೋವನ್ನು ಹೊರಹಾಕದೆ ಸದಾ ತಾಳ್ಮೆಯಿಂದ ಮುಗಳ್ನಗುತ್ತಿದ್ದ ವ್ಯಕ್ತಿತ್ವ ಕೃಷ್ಣನದ್ದು.

44) ಸವಾಲುಗಳನ್ನು ತನ್ನ ಚತುರ ಬುದ್ಧಿವಂತಿಕೆಯಿಂದ ಕೃಷ್ಣ ಎದುರಿಸುತ್ತಾ ಮುಂದುವರೆಯುತ್ತಾನೆ.

45) ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಭವಿಷ್ಯವನ್ನುಅರಿಯುವ ವಿಶೇಷವಾದ ದೈವಿಶಕ್ತಿಯಿತ್ತು.

46) ಇನ್ನೊಬ್ಬರ ಮನಸ್ಸನ್ನು ಮುಖ ನೋಡಿ ಅರ್ಥಮಾಡಿಕೊಳ್ಳಬಲ್ಲ ವಿಶೇಷವಾದ ಮನೋಶಾಸ್ತ್ರಜ್ಞ ಕೂಡ ಈತನಾಗಿದ್ದ.

47) ಈತನ ಜೀವನ ಈತನ ಸಂದೇಶ ನಿಜಕ್ಕೂ ನಮಗೆಲ್ಲಾ ದಾರಿದೀಪ.

Leave a reply

Latest Posts

Trend: Exevor launched new tool for domain availability check

Trend: Exevor launched new tool for domain availability check

We launched a tool for search domain name for check availability. This tool is little bit straight and quick.

Kiwifruit

Kiwifruit

Kiwifruit, also known simply as kiwi, is a small, fuzzy fruit with a brown, hairy skin and bright green flesh. It is known for its unique, sweet-tart flavor and vibrant green color. The scientific name for the most common variety is Actinidia deliciosa. Kiwifruit is native to China and was originally called Chinese gooseberry, but it was later renamed kiwifruit or kiwi in reference to the New Zealand national bird, the kiwi, which has a similar brown, fuzzy exterior.

Golden Temple Kushalnagar, Coorg's

Golden Temple Kushalnagar, Coorg's

The Golden Temple in Kushalnagar, Coorg, is officially known as the Namdroling Monastery. It is a significant Tibetan Buddhist monastery and is one of the largest teaching centers of the Nyingma lineage of Tibetan Buddhism outside Tibet.

Mysore Palace

Mysore Palace

The Mysore Palace, also known as the Amba Vilas Palace, is a historical palace located in the city of Mysore in the southern state of Karnataka, India. It is one of the most famous tourist attractions in the country and is renowned for its magnificent architecture and rich cultural heritage.